Home

                                                     "ಕುಂದುಕೊರತೆ ಸಹಾಯವಾಣಿ ಸಂಖ್ಯೆ"  08533-231061 

ಗಂಗಾವತಿ ನಗರ ಸ್ವಾತಂತ್ರ ಪೂರ್ವದಲ್ಲಿ ನಿಜಾಮ್ ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿ ಬರುತ್ತಿದ್ದು, ರಾಜ್ಯ ಪುನರ್ ವಿಂಗಡಣೆ ನಂತರ ಕರ್ನಾಟಕ ರಾಜ್ಯದ  ರಾಯಚೂರು     ಜಿಲ್ಲೆಯಲ್ಲಿ    ಬಂದಿದೆ.    ಗಂಗಾವತಿಯನ್ನು   ಈ   ಹಿಂದೆ   ನೀಲಾವತಿ  ಎಂದು   ಸಹ ಗುರುತಿಸಲಾಗುತ್ತಿದ್ದು,   ಅಭಿವೃದ್ಧಿ   ಮತ್ತು ಕೃಷಿಪ್ರಾಧ್ಯಾನತೆಯಿಂದ  ಕರ್ನಾಟಕದಲ್ಲಿ " ಭತ್ತದ  ಕಣಜ"ವೆಂದು ಕರೆಯಲ್ಪಡುತ್ತದೆ.

 ಪ್ರಸಕ್ತ  1997ರ   ಕೊಪ್ಪಳ  ಹೊಸ  ಜಿಲ್ಲೆಯಲ್ಲಿ  ಬರುತ್ತಿದ್ದು,  ಐತಿಹಾಸಿಕ ಸ್ಥಳಗಳಾದ ಕಿಷ್ಕಿಂದೆ (ಆನೆಗುಂದಿ) ಹಂಪಿ ತುಂಗಭದ್ರಾ ಡ್ಯಾಮ್ ವ್ಯಾಪ್ತಿಗೆಒಳಪಡುತ್ತಿದೆ. ಗಂಗಾವತಿ  ತಾಲ್ಲೂಕಾ ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರದಿಂದ 43 ಕಿಮೀ. ಅಂತರದಲ್ಲಿ ಮತ್ತು ಬೆಂಗಳೂರು ರಾಜ್ಯ ಕೇಂದ್ರದಿಂದ 350 ಕಿಮೀ.  ಅಂತರದಲ್ಲಿದೆ. 40    ಕಿಮೀ  ಅಂತರದಲ್ಲಿ  ಹೊಸಪೇಟೆಯ ರೈಲ್ವೆ  ನಿಲ್ದಾಣ ಇದೆ. ಐತಿಹಾಸಿಕ   ಪರಂಪರೆಯ  ಹಂಪಿ  ಕೇವಲ 13 ಕಿಮೀ ಅಂತರದಲ್ಲಿದೆ. ಇದರಿಂದ  ಸಾಕಷ್ಟು  ಪ್ರಮಾಣದ ಪ್ರವಾಸಿಗರನ್ನು    ಆಕರ್ಷಿಸುವ  ಕೇಂದ್ರವಾಗಿದೆ. ತುಂಗಭದ್ರಾ ನದಿಗೆ ಡ್ಯಾಮ್   ಕಟ್ಟಡದ ನಂತರ ನೀರಾವರಿಯಿಂದ   ಆವೃತ್ತಿಗೊಂಡು ಕೃಷಿ  ಪ್ರಾಧ್ಯಾನತೆಯಿಂದ ವಿಶೇಷವಾಗಿ ಭತ್ತ,  ಕಬ್ಬು,  ಬಾಳೆ,  ಕಡಲೆ ಹಾಗೂ  ಹತ್ತಿಯನ್ನು ಬೆಳೆಯಲಾಗುತ್ತಿದೆ. ಇಲ್ಲಿಯ  ಅಕ್ಕಿ  ತುಂಬಾ   ಪ್ರಸಿದ್ದವಾಗಿದ್ದು,  ದೇಶ-ವಿದೇಶಗಳಿಗೆ  ರವಾನೆಯಾಗುತ್ತೆದೆ. 30 ರಿಂದ  40 ರೈಸ್ ಮಿಲ್ ಗಳನ್ನು, 70  ಸಣ್ಣ  ಕೈಗಾರಿಕೆ ಉದ್ದಿಮೆಗಳು, ಫ್ಲೋರ್ ಮಿಲ್ಸ್ ಕಾಟನ್ ಮಿಲ್, ಸ್ಪಿಲಿಂಗ್ ಮಿಲ್ ಗಳನ್ನು ಹೊಂದಿದೆ. ಹೆಚ್ಚಾಗಿ ಉದ್ಯಮಗಳಿರುವುದರಿಂದ ಇದನ್ನು ಅವಲಂಬಿಸಿ ಬೇರೆ ಕಡೆಯಿಂದ ಕಾರ್ಮಿಕರ ವಲಸೆಯಾಗಿ ಬಂದಿರುತ್ತಾರೆ. ಇಲ್ಲಿಯ ಸರಾಸರಿ ಮಳೆ ಪ್ರಮಾಣ 509.15 ಮಿ.ಮೀ. ದಕ್ಷಿಣ-ಪಶ್ಚಿಮದ ಮಾನ್ಸೂನ್ ಜೂನನಿಂದ ಸೆಪ್ಟೆಂಬರವರೆಗೆ ಇರುತ್ತದೆ. ನಗರದ ತಾಪಮಾನ ಗರಿಷ್ಠ 41.10 ಡಿ.ಸೆ. ಮತ್ತು ಕನಿಷ್ಠ 14.6 ಡಿ.ಸೆ. ಇರುತ್ತದೆ. 2001 ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 93,240 ಅದೇ 1991 ರಲ್ಲಿ  74,818  ಇತ್ತು  18,000   ಕುಟುಂಬಗಳನ್ನು ಹೊಂದಿದ್ದು,   ಶೇ.12.68   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಹೊಂದಿರುತ್ತದೆ. ಅಕ್ಷರ ಜ್ಞಾನದ ಪ್ರಮಾಣ ಶೇ.56.66 ಇರುತ್ತದೆ.

                                                   


 Gangavathi,before independence was under the Nizam state and after Independence and reorganisation of states,it became part of Raichur district in Karnataka State. Formerly known as Neelavati,Gangavathi was the centre for development activities in agricultural sector and was rightly called as the "Rice Bowl of Karntaka"

 

Gangavathi is located in the newly formed Koppal District of Karnataka State.It is surrounded by KhisKinde(Anegundi),Hampi and Tungabhadra Dam.The City is Taluk head Quarter located at 43Km from Koppal and 350Km from Bagalore the State Head Quarter.The near Raiway Station is Hospet about 40km from Gangavathi City.The Eminent historical City of Hampi is only at 13km from Gangavathi city attracting large numbers of tourists.After construction of Tungabhadra Dam at Munirabad about 40km from City the agricultural,production of area increased rapidly. Specialy, production of Paddy,Sugar cane,Banana,Ground nuts,Cottons etc.,This city is the leading producer of rice in Karnataka.There about 30 to 40 rice mills nd 70 small-Scale industries, 50 to 60% are flour mills,cotten ginning mills,spinning mil etc., are the major industries located in Gangavathi.this development resulted in migration of the labour to the City.The average rainfall is 509.15mm, South-West mansoon begins int the month of June and continues up to Setember. The climate of the town generally dry(41.1o and 14.6o ).The population of the city 93,249 as per 2001 census, where it was 7818 in 1991,comprising 18000 house holds.Person belongs SC/ST 12.68%. The city has a 56.66% litracy rate.

 ಗಣಕೀಕರಣ : ಗಂಗಾವತಿ ನಗರಸಭಾ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1995ನೇ ಸಾಲಿನಿಂದ ಈ ವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು,ನಾಗರೀಕರು ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ದಿ:28/06/2008ರಿಂದ ಜನನ-ಮರಣ ಗಣಕೀಕೃತ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುವ ಪದ್ದತಿಯು ಜಾರಿಯಲ್ಲಿರುತ್ತದೆ.


 Computerisation : Properties within Gangavathi CMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1995. Citizens can make use of this facility to register & obtain Birth & Death Certificates. Birth and Death Online application is launched on 28/06/2008.

This page is maintained by "Municipal Commissioner. C.M.C Gangavathi" Last Updated on 17/01/2012

 

 

No. Of Visitors :
Last Updated   : 18/04/2012  Release History
Release 2.0.0, Powered By Karnataka Municipal Data Society & maintained by Gangavathi CMC
This website can best viewed with the resolution 1024 * 768 using Internet Explorer 7.0 or above.
Valid CSS!